ಮ್ಯಾಂಡೋಲಿನ್ ಮಾಂತ್ರಿಕ ಶ್ರೀನಿವಾಸ್ ಇನ್ನಿಲ್ಲ


ಮ್ಯಾಂಡೋಲಿನ್ ವಾದಕ ಶ್ರೀನಿವಾಸ್ ಅವರು ಶುಕ್ರವಾರ ನಿಧನರಾಗಿದ್ದಾರೆ.
ಮ್ಯಾಂಡೋಲಿನ್ ಮಾಂತ್ರಿಕ ಶ್ರೀನಿವಾಸ್ ಅವರ ಹಠಾತ್ ನಿರ್ಗಮನ ಸಂಗೀತದ ಅಭಿಮಾನಿಗಳಲ್ಲಿ ನೋವು, ದಿಗ್ಬ್ರಮೆ, ಶೋಕ ಹುಟ್ಟಿಸಿದೆ.
1969ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಶ್ರೀನಿವಾಸ್ ಅವರು 6ನೇ ವಯಸ್ಸಿನಲ್ಲೇ ತಂದೆ ಸತ್ಯನಾರಾಯಣ ಅವರ ಮ್ಯಾಂಡೋಲಿನ್ ಬಾರಿಸಲು ಆರಂಭಿಸಿದರು. 1978ರಲ್ಲಿ ಅಂದರೆ ತಮ್ಮ ೯ನೇ ವರ್ಷದಲ್ಲಿ ಮೊದಲಬಾರಿಗೆ ಸಾರ್ವಜನಿಕವಾಗಿ  ಮ್ಯಾಂಡೋಲಿನ್ ವಾದನ ಮಾಡಿದ ಶ್ರೀನಿವಾಸ್  ಆಮೇಲೆ ಹಿಂತಿರುಗಿ ನೋಡಲಿಲ್ಲ.
ಹಲವಾರು ದೇಶಗಳಲ್ಲಿ ಸಂಗೀತ ಪ್ರದರ್ಶನ ನೀಡಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದರು.
ಅವರಿಗೆ 1998ರಲ್ಲಿ ಪದ್ಮಶ್ರೀ, 2010ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಸಂಗೀತ ರತ್ನ, ಸನಾತನ ಸಂಗೀತ ಪುರಸ್ಕಾರ, ಮೈಸೂರು ಟಿ ಚೌಡಯ್ಯ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ, ಕಾಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವಕ್ಕೆ ಪಾತ್ರರಾಗಿದ್ದರು.
ಅವರು ಕರುಳು ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅವರ ನೆನಪಿನಲ್ಲಿ …

‍ಲೇಖಕರು G

September 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Pramod

    ಉಜಿರೆಯಲ್ಲಿ ಪಿಯುಸಿ ಓದುತ್ತಿದ್ದ ಸಮಯ. ಕೆಮಿಸ್ಟ್ರಿಯ ಮಲ್ಲ ಸರ್ ಸ೦ಗೀತ ಸಮ್ಮೋಹನದ ಲೋಕಕ್ಕೆ ಕರೆದೊಯ್ದಿದ್ದು. ಆಗ ಸಿಡಿ ಪ್ಲೇಯರ್ ನಲ್ಲಿ ಹಾಕಿದ ಶ್ರೀನಿವಾಸ್ ರ ರಘುವ೦ಶ ಸುಧಾ ಈಗಲೂ ಕಿವಿಯಲ್ಲಿ ಗು೦ಯಿಗುಡುತ್ತಿದ್ದೆ. ಆ ಕಾಲಕ್ಕೆ ಎಳೆಯುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: